¡Sorpréndeme!

ಪದ್ಮಾವತಿ ಪರನಿಂತ ಶಿವಣ್ಣ ವಿರುದ್ದ ತಿರುಗಿಬಿದ್ರು | Filmibeat Kannada

2017-11-28 1 Dailymotion

'ಪದ್ಮಾವತಿ'.... ಸದ್ಯ ವಿವಾದದ ಕೇಂದ್ರಬಿಂದುವಾಗಿರೋ ಸಿನಿಮಾ. ಎಲ್ಲೆಡೆ ಸಿನಿಮಾ ಬಿಡುಗಡೆಯಾಗದಂತೆ ತಡೆಯಲು ಪ್ರತಿಭಟನೆಗಳು ನಡೆಯುತ್ತಲೇ ಇದೆ. ಸಾಮಾನ್ಯವಾಗಿ ಪ್ರಾರಂಭವಾದ ವಿವಾದ ಉಗ್ರರೂಪ ತಾಳಿ ಸಿನಿಮಾತಂಡ ಮುಂದೇನು ಮಾಡಬೇಕು ಅನ್ನೋದನ್ನ ನಿರ್ಧಾರ ಮಾಡಲಾರದೆ ಕೈಕಟ್ಟಿ ಕೂರುವಂತೆ ಮಾಡಿದೆ. 'ಪದ್ಮಾವತಿ' ಸಿನಿಮಾದ ವಿವಾದ ಪ್ರಾರಂಭವಾಗುತ್ತಿದ್ದಂತೆಯೇ ಇಡೀ ಭಾರತೀಯ ಚಿತ್ರರಂಗ 'ಪದ್ಮಾವತಿ' ಸಿನಿಮಾ ಪರವಾಗಿ ನಿಂತು ಮಾತನಾಡಿತ್ತು. ಇದಕ್ಕೆ ಕನ್ನಡ ಚಿತ್ರರಂಗವೂ ಹೊರತಾಗಿರಲಿಲ್ಲ. ಕನ್ನಡದ ಅನೇಕ ಸ್ಟಾರ್ ಗಳು ಕನ್ನಡದ ನಟಿ ದೀಪಿಕಾ ಪರವಾಗಿ ನಾವಿದ್ದೇವೆ ಎಂದು ಧೈರ್ಯ ತುಂಬಿತ್ತು. ನಮ್ಮ ನೆಲದ ನಟಿಗೆ ನಮ್ಮ ಸ್ಟಾರ್ ಗಳು ಪರವಹಿಸಿದ್ದೇ ಈಗ ವಿವಾದಕ್ಕೆ ಎಡೆಯಾಗಿದೆ. ಸ್ಯಾಂಡಲ್ ವುಡ್ ನ ಸೆಂಚುರಿ ಸ್ಟಾರ್ ಪದ್ಮಾವತಿ ಸಿನಿಮಾ ಬಗ್ಗೆ ನೀಡಿದ್ದ ಹೇಳಿಕೆಗೆ ಅನೇಕರು ಕೆಂಡಮಂಡಲವಾಗಿದ್ದಾರೆ. ಮುಂದೆ ಓದಿರಿ..ಡಿಸೆಂಬರ್ 1 ರಂದು ರಾಜ್ಯಾದ್ಯಂತ ತೆರೆಗೆ ಬರ್ತಿರೋ 'ಮಫ್ತಿ' ಸಿನಿಮಾದ ಸುದ್ದಿಗೋಷ್ಟಿಯಲ್ಲಿ 'ಪದ್ಮಾವತಿ' ಸಿನಿಮಾದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಉತ್ತರಿಸಿದ್ರು. ತಮ್ಮ ಅಭಿಪ್ರಾಯವನ್ನ ಮುಕ್ತವಾಗಿ ಹೇಳಿದ್ರು. ಈಗ ಅದೇ ವಿಚಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗಿದೆ.

while talking about mafthi movie shivarakmuar also talk about the movie padmavathi..watch this video